ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟವನ್ನು ಪ್ರತೀ ಎರಡು ವರ್ಷಗಳಿಗೊಮ್ಮೆ ಏಷ್ಯನ್ ಅಥ್ಲೆಟಿಕ್ ಅಸೋಸಿಯೇಷನ್( ) ವತಿಯಿಂದ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಏಷ್ಯಾದ ಎಲ್ಲಾ ರಾಷ್ಟ್ರಗಳೂ ಈ ಕ್ರೀಡಾಕೂಟದ ಪ್ರತೀ ವಿಭಾಗಕ್ಕೆ ತಮ್ಮ ದೇಶದಿಂದ ಇಬ್ಬರು ಸ್ಪರ್ಧಿಗಳನ್ನು ಕಳಿಸಬಹುದು. ಕ್ರೀಡಾಕೂಟವನ್ನು ಸಂಘಟಿಸುವ ದೇಶಕ್ಕೆ ಇಬ್ಬರ ಬದಲು ಮೂವರನ್ನು ಕಳಿಸುವ ವಿಶೇಷ ಸೌಲಭ್ಯ ದೊರೆಯುತ್ತದೆ. == ಕ್ರೀಡಾಕೂಟದ ಆವೃತ್ತಿಗಳು == == ೨೧ ನೇ ಆವೃತ್ತಿ == ೨೦೧೫ರ ಜೂನ್ ಮೂರರಿಂದ ೭ನೇ ತಾರೀಖಿನವರೆಗೆ ಚೀನಾದ ವುಹಾನ್ ನಗರದಲ್ಲಿ ನಡೆದಿತ್ತು. == ೨೨ನೇ ಆವೃತ್ತಿ: == ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದ ೨೨ನೇ ಆವೃತ್ತಿಯು ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿದೆ. ಜುಲೈ ೬ ರಿಂದ ೯ರವರೆಗೆ ನಡೆಯಬೇಕಾಗಿದ್ದ ಈ ಕ್ರೀಡಾಕೂಟ ಮೊದಲು ಜಾರ್ಖಂಡಿನ ರಾಂಚಿಯಲ್ಲಿ ನಡೆಯಬೇಕಿತ್ತು. ಆದರೆ ರಾಂಚಿಯು ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ಅಸಮರ್ಥವಾಗಿದ್ದ ಕಾರಣ ಕ್ರೀಡಾಕೂಟವನ್ನು ನಂತರ ಭುವನೇಶ್ವರದ ಕಳಿಂಗ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು. ಭಾರತದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ಮೂರನೆಯ ನಗರಿ ಭುವನೇಶ್ವರ. ಉಳಿದೆರಡು ನಗರಗಳೆಂದರೆ ದೆಲ್ಲಿ(೧೯೮೯) ಮತ್ತು ಪೂನಾ(೨೦೧೩) ೪೫ ದೇಶಗಳ ಸುಮಾರು ೮೦೦ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಈ ಏಷ್ಯನ್ ಕ್ರೀಡಾಕೂಟದ ವಿಜೇತರಿಗೆ ೨೦೧೭ರ ಲಂಡನ್ನಿನ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವ ಅರ್ಹತೆ ದೊರೆಯಲಿದೆ. ವಿಶ್ವ ಅಥ್ಲೆಟಿಕ್ ಕ್ರೀಡಾಕೂಟ ಆಗಸ್ಟ್ ೪ರಿಂದ ೧೩ರ ವರೆಗೆ ನಡೆಯಲಿದೆ. === ಕಳಿಂಗ ಕ್ರೀಡಾಂಗಣ, ಒಡಿಸ್ಸಾ === ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ೧೫,೦೦೦ ಪ್ರೇಕ್ಷಕರಿಗೆ ಆಸನ ವ್ಯವಸ್ಥೆಯಿದೆ. ೨೦೧೭ರಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕಾಗಿ ಕ್ರೀಡಾಂಗಣವನ್ನು ಸಿಂಥೆಟಿಕ್ ಟ್ರ್ತಾಕ್ ಮತ್ತು ಫ್ಲಡ್ ಲೈಟ್ ಗಳಿಂದ ನವೀಕರಿಸಲಾಯಿತು. === ಲಾಂಛನ: === ಮೇ ೮, ೨೦೧೭ರಲ್ಲಿ ಏಷ್ಯನ್ ಕ್ರೀಡಾಕೂಟದ ೨೨ನೇ ಆವೃತ್ತಿಯ ಲಾಂಛನ "ಓಲಿ" ಅನ್ನು ಬಿಡುಗಡೆ ಮಾಡಲಾಯಿತು.ಓಲಿ ಎಂಬುವ ಅಳಿವನಂಚಿನಲ್ಲಿರುವ ಆಮೆಯ ಪ್ರಬೇಧವು ಒಡಿಸ್ಸಾದ ರುಷಿಕುಲ್ಯ ಮತ್ತು ಗಹಿರ್ಮಾತ ತೀರಗಳಿಗೆ ಸಂತಾನಾಭಿವೃದ್ಧಿಗೆ ಭೇಟಿ ನೀಡುತ್ತದೆ. ಅದರ ಬಗೆಗಿನ ಅರಿವನ್ನು ಹೆಚ್ಚಿಸಿ ಅದರ ಸಂರಕ್ಷಣೆಗೆ ನೆರವಾಗುವ ಉದ್ದೇಶದಿಂದ ಓಲಿ ಅಥವಾ ಓಲಿ ರಿಡ್ಲೆ ಎಂಬುವ ಆ ಆಮೆಯ ಪ್ರಬೇಧವನ್ನು ಈ ವರ್ಷದ ಕ್ರೀಡಾಕೂಟದ ಲಾಂಛನವನ್ನಾಗಿ ಆಯ್ಕೆ ಮಾಡಲಾಗಿದೆ. ಒಡಿಸ್ಸಾದ ೩೦ ಜಿಲ್ಲೆಗಳಲ್ಲಿ ಸಂಚರಿಸಿದ ಕ್ರೀಡಾಕೂಟದ ಲಾಂಛರ್ಯraಲಿಗೆ ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಹಸಿರು ನಿಶಾನೆ ತೋರಿದರು === ಉದ್ಘಾಟನಾ ಸಮಾರಂಭ === ಜುಲೈ ೫ರಂದು ನಡೆದ ಉದ್ಘಾಟಆ ಸಮಾರಂಭದಲ್ಲಿ ೫೦೦ ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದರು. ಅದರಲ್ಲಿ ಸುಮಾರು ೪೦೦ ಒಡಿಸ್ಸೀ ಕಲಾವಿದರು ಭಾಗವಹಿಸಿದ ಕಳಿಂಗ ಯುದ್ದ ಮತ್ತು ಕರವೇಳ ರಾಜನ ಬಗೆಗಿನ ನೃತ್ಯರೂಪಕ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು. === ಪದಕ ಪಟ್ಟಿ === ೨೦೧೭ : ೨೦೧೭ರ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ